ಸಾಹಿತ್ಯ ಲೋಕದಲಿ ಅಸೀಮ ಪ್ರತಿಭೆ ನಿಮದು ಕಂದವೋ ವೃತ್ತವೋ ಷಟ್ಟದಿಯೊ ರಗಳೆಯೋ ಯಾವುದೇ ಪ್ರಕಾರದಲ್ಲಿ ಸುಲಭದಲ್ಲಿ ಬರೆದಿಹಿರಿ
Friday, 1 July 2022
Y.S.G. Naanu Kandanthe by Giri Shastry.
Monday, 11 April 2022
ಶ್ರೀ ರಾಮಚಂದ್ರನಿಗೆ ಮಾನಸ ಪೂಜೆ
ಶ್ರೀರಾಮ ಸಮರ್ಥ
ಎನ್ನ ಮಾನಸಪೂಜೆ ಸ್ವೀಕರಿಸು ಶ್ರೀರಾಮ ॥ಪ॥
ನಿನ್ನ ನಂಬಿದ ಎನ್ನ ಕಡೆಗಣಿಸದಿರು ದೇವ ॥ಅ.ಪ.॥
ಭವದ ವನದಲಿ ಅಲೆದು ಬಸವಳಿದಿರುವೆ ಸ್ವಾಮಿ
ಭವಿಯಾದ ಎನಗಿನ್ನೂ ಕಾಣದಾಗಿದೆ ದಾರಿ
ಕಾವ ದೈವದ ಕೃಪೆಗೆ ಕಾಯುತಿರುವೆನು ನಿಜದಿ
ಜೀವನದಿ ಕರಪಿಡಿದು ಸನ್ಮಾರ್ಗದಲಿ ನಡೆಸು ॥೧॥
ಶಿಲೆಯಾದಹಲ್ಯೆಯನು ಸ್ಪರ್ಶ ಮಾತ್ರದಿ ಪೊರೆದೆ
ವಾಲಿಯನು ಸಂಹರಿಸಿ ಸುಗ್ರೀವನನು ಕಾಯ್ದೆ
ಬಲವಾದ ಪರಶುಧರ ಭಾರ್ಗವನ ಮದ ಮುರಿದೆ
ಅಳಿಲ ಭಕ್ತಿಗೆ ಮೆಚ್ಚಿ ಮೈದಡವಿ ಸಲಹಿದೆ ॥೨॥
ಮೋಹ ಮಮಕಾರಗಳ ಶರಜಾಲದಲಿ ಸಿಲುಕಿ
ಸ್ವಹಿತವೇ ಸವಿಯೆಂದು ನಂಬಿ ಬಾಳುತಲಿರುವೆ
ವಿಹಿತವಾದುದನರುಹು ಸರಿದಾರಿಯಲಿ ನಡೆಸು
ಪಾಹಿ ಶ್ರೀರಘುರಾಮ ಪರಮ ಪಾವನ ನಾಮ ॥೩॥
೧೦-೪-೨೦೨೨ ವೈ. ಜಿ. ಗಿರಿಶಾಸ್ತ್ರಿ ಬೆಂಗಳೂರು
[ಶುಭಕೃತುನಾಮ ಸಂವತ್ಸರ ಚೈತ್ರ ಶುದ್ಧ ಶ್ರೀರಾಮನವಮಿಯಂದು (೧೦-೪-೨೦೨೨) ಬರೆದ ಭಕ್ತಿಗೀತೆ.]
Subscribe to:
Posts (Atom)