Wednesday, 21 July 2010

more - a prayer

ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ 95 ನೆಯ ಆರಾಧನಾ ಮಹೋತ್ಸವದ ಸವಿನೆನಪಿಗಾಗಿ
ಶ್ರೀ ವೈ.ಜಿ. ಗಿರಿಶಾಸ್ತ್ರಿಯವರು ರಚಿಸಿದ ಗೀತೆ.                                        


     
              ಮೊರೆ

ಎಷ್ಟು ದಿನ ಈ  ತೆರದಿ ಮೌನದಿಂದಿರುವೆ        //ಪ//
ಕಷ್ಟಗಳ ನಾ ಸಹಿಸೆ ದಯತೋರು ಗುರುವೇ      //ಅ//

ಬಿಳಿಯ ಶಿಲೆಯಲಿ    ಕುಳೀತು ಏಕಿಂತು ಪರಿಕಿಸುವೆ? 
ಬಳಲುತಿರುವೆನು ಸ್ವಾಮಿ ಈ ಭವದ ಬೇಗೆಯಲಿ
ಸುಲಭ ನೀನೆನ್ನುವರು ಎನಗೇಕೆ ದುರ್ಲಭನು?
ಒಲವ ಧಾರೆಯನೆರೆದು ಸಲಹೆನ್ನ ಸದ್ಗುರುವೇ //

ಕರುಣಾಳು ಗುರುದೇವ ಕರೆದೊಡನೆ ಕನಿಕರಿಸು//
ಕರಪಿಡಿದು ಕಾಪಾಡು ನಿನ್ನಲ್ಲಿ ಮೊರೆಯಿಡುವೆ//
ತೊರೆಯದಿರು ಕಂದನನು ಕಡೆಗಣಿಸದಿರು ತಂದೆ//
ಚರಣಗಳ ಹಿಡಿದಿರುವೆ ಸಂತೈಸು ಸಂತಸದಿ//

ನೀನೆನಗೆ ಅಧಿದೈವ ನೀನಗೆ ಸರ್ವಸ್ವ
ನೀನೆನ್ನ ಬಾಳ ಪಯಣಕೆ ದಿವ್ಯ ಬೆಳಕು//
ನೀನು ಪಾವನಚರಿತ ಎನ್ನ ಹರಸೈ ಪ್ರಭುವೆ
ಭಾನು ತೇಜೋಮೂರ್ತಿ ಶ್ರೀ ಬ್ರಹ್ಮಚೈತನ್ಯ//
              - ವೈ. ಜಿ. ಗಿರಿಶಾಸ್ತ್ರಿ.