Friday, 1 July 2022

Y.S.G. Naanu Kandanthe by Giri Shastry.





 


ಮುಗ್ಧ ಮನಸುಗಳಲ್ಲಿ ಜ್ಞಾನದೀವಿಗೆ ಬೆಳಗಿ ಸಚ್ಚರಿತರಾಗಿಸಲು ಕಾಯವನೆ ಸವೆಸಿದಿರಿ ವಿದ್ಯಾರ್ಥಿ ಗುಂಪಿನಲಿ ಎಲ್ಲರೂ ಮುಗ್ಧರೇ? ಇರಬಹುದು ಒಂದಷ್ಟು ಮಂದಿ ಕೆಟ್ಟವರು ಹರಿಣಗಳ ತೋಟದಲ್ಲಿ ವ್ಯಾಘ್ರ ನೆಲೆಸಿದರೇನು? ಪುಣ್ಯಕೋಟಿಯು ನೀವು ಪಳಗಿಸುತವರಲ್ಲಿನ ಕ್ರೌರ್ಯವನ್ನು ಕಳೆದು ನೇರ್ಪುಗೊಳಿಸಿದಿರಿ ಪಠ್ಯವಷ್ಟೇ ಪಾಠವಲ್ಲವೆಂಬುದನರಿತು ಮಕ್ಕಳ ಬೌದ್ಧಿಕ ವಿಕಸನಕ್ಕೆ ನೆರವಾಗುವ ಪುರಾಣೇತಿಹಾಸದ ಬಾಲಕರ ಕತೆಗಳನು ಮನಮುಟ್ಟುವಂತೆ ಹೇಳಿದಿರಿ; ಸಂಸ್ಕಾರ ತುಂಬಿದಿರಿ ನಿಮ್ಮಿಂದ ವಿದ್ಯೆ ಕಲಿತ ಪ್ರತಿಭೆಗಳೆಷ್ಟೋ ಇಂದು ವಿಶ್ವದ ವಿವಿಧ ವಲಯಗಳಲ್ಲಿ ಶ್ರದ್ಧಾಸಕ್ತಿಯಿಂದ ಕರ್ತವ್ಯ ನಿರ್ವಹಿಸಿ ಸತ್ಪಜೆಗಳಾಗಿಹರು ನಿಮಗೆ ಕೀರ್ತಿಯ ತಂದು ನೆಮ್ಮದಿಯಿಂದಿಹರು ಎಷ್ಟೋ ಏಕಲವ್ಯರಿಗೆ ದ್ರೋಣರಾದಿರಿ ನೀವು ನಿಮ್ಮ ಗುರುವೃತ್ತಿಯ ಅನುಪಮದ ಸೇವೆಗೆ ರಾಷ್ಟ್ರ ಮನ್ನಣೆ ದೊರಕಿ  ಹೆಮ್ಮೆ ತಂದಿರಿ ನಾಡಿಗೆ
ಸಾಹಿತ್ಯ ಲೋಕದಲಿ ಅಸೀಮ ಪ್ರತಿಭೆ ನಿಮದು ಕಂದವೋ ವೃತ್ತವೋ ಷಟ್ಟದಿಯೊ ರಗಳೆಯೋ ಯಾವುದೇ ಪ್ರಕಾರದಲ್ಲಿ ಸುಲಭದಲ್ಲಿ ಬರೆದಿಹಿರಿ









 


ಯಾತರ ಮಡಿ ನಮ್ಮದು















 

Monday, 11 April 2022

ಶ್ರೀ ರಾಮಚಂದ್ರನಿಗೆ ಮಾನಸ ಪೂಜೆ


ಶ್ರೀರಾಮ ಸಮರ್ಥ 


ಎನ್ನ ಮಾನಸಪೂಜೆ ಸ್ವೀಕರಿಸು ಶ್ರೀರಾಮ ॥ಪ॥

ನಿನ್ನ ನಂಬಿದ ಎನ್ನ ಕಡೆಗಣಿಸದಿರು ದೇವ ॥ಅ.ಪ.॥


ಭವದ ವನದಲಿ ಅಲೆದು ಬಸವಳಿದಿರುವೆ ಸ್ವಾಮಿ 

ಭವಿಯಾದ ಎನಗಿನ್ನೂ ಕಾಣದಾಗಿದೆ ದಾರಿ 

ಕಾವ ದೈವದ ಕೃಪೆಗೆ ಕಾಯುತಿರುವೆನು ನಿಜದಿ 

ಜೀವನದಿ ಕರಪಿಡಿದು ಸನ್ಮಾರ್ಗದಲಿ ನಡೆಸು ॥೧॥


ಶಿಲೆಯಾದಹಲ್ಯೆಯನು ಸ್ಪರ್ಶ ಮಾತ್ರದಿ ಪೊರೆದೆ 

ವಾಲಿಯನು ಸಂಹರಿಸಿ ಸುಗ್ರೀವನನು ಕಾಯ್ದೆ 

ಬಲವಾದ ಪರಶುಧರ ಭಾರ್ಗವನ ಮದ ಮುರಿದೆ 

ಅಳಿಲ ಭಕ್ತಿಗೆ ಮೆಚ್ಚಿ ಮೈದಡವಿ ಸಲಹಿದೆ ॥೨॥


ಮೋಹ ಮಮಕಾರಗಳ ಶರಜಾಲದಲಿ ಸಿಲುಕಿ 

ಸ್ವಹಿತವೇ ಸವಿಯೆಂದು ನಂಬಿ ಬಾಳುತಲಿರುವೆ 

ವಿಹಿತವಾದುದನರುಹು ಸರಿದಾರಿಯಲಿ ನಡೆಸು 

ಪಾಹಿ ಶ್ರೀರಘುರಾಮ ಪರಮ ಪಾವನ ನಾಮ ॥೩॥


೧೦-೪-೨೦೨೨                ವೈ. ಜಿ. ಗಿರಿಶಾಸ್ತ್ರಿ                         ಬೆಂಗಳೂರು 


[ಶುಭಕೃತುನಾಮ ಸಂವತ್ಸರ ಚೈತ್ರ ಶುದ್ಧ ಶ್ರೀರಾಮನವಮಿಯಂದು (೧೦-೪-೨೦೨೨) ಬರೆದ ಭಕ್ತಿಗೀತೆ.]

Wednesday, 12 May 2021

Saturday, 18 January 2020

nambide ninnanu anavarata


ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಕುರಿತು ಬರೆದ  ಪದ್ಯ